ಅಭಿಪ್ರಾಯ / ಸಲಹೆಗಳು

ಮಂಡಳಿಯ ಉದ್ದೇಶ

ಕರ್ನಾಟಕ  ರೇಷ್ಮೆ ಮಾರಾಟ ಮಂಡಳಿ ನಿಯಮಿತ (ಕೆ.ಎಸ್.ಎಂ.ಬಿ) ಕರ್ನಾಟಕ ಸರ್ಕಾರದ ಒಂದು ಉದ್ಯಮವಾಗಿದ್ದು  ಕಂಪನಿ ಕಾಯ್ದೆ 1956 ರ  ಅಡಿಯಲ್ಲಿ ಸ್ಥಾಪನೆಗೊಂಡಿದ್ದು ರೇಷ್ಮೆ ವಿನಿಮಯ ಕೇಂದ್ರದ ಅನುಬಂಧ ಸಂಸ್ಥೆಯಾಗಿ 1979 ರಲ್ಲಿ ಸ್ಥಾಪನೆಗೊಂಡಿತು. ರೇಷ್ಮೆ ಬೆಲೆಯಲ್ಲಿ ಸ್ಥಿರತೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಸರ್ಕಾರದಿಂದ ಸ್ಥಾಪನೆಯಾದ ಏಕೈಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ರೇಷ್ಮೆ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ ಮಾಡಿ ರೈತರ ಮತ್ತು ರೀಲರುಗಳ ಹಿತ ಕಾಪಾಡುವುದು ಮುಖ್ಯ ಉದ್ದೇಶವಾಗಿರುತ್ತದೆ. ಹಾಗೂ ನೇಕಾರರಿಗೆ ಉತ್ತಮ ಗುಣಮಟ್ಟದ ರೇಷ್ಮೆ ನೂಲನ್ನು ನ್ಯಾಯಯುತವಾದ ಬೆಲೆಯಲ್ಲಿ  ಹಾಗೂ ನಿರಂತರವಾಗಿ ಶಾಖೆಗಳ ಮುಖಾಂತರ ಮಾರಾಟ ಮಾಡಲಾಗುವುದು.

ಅಲ್ಲದೇ 2019-20 ನೇ ಸಾಲಿನಿಂದ ರೈತರು/ರೀಲರುಗಳಿಂದ ರೇಷ್ಮೆ ನೂಲನ್ನು ಒತ್ತೆ ಇಟ್ಟುಕೊಳ್ಳುವ ಪ್ರಕ್ರಿಯೆಗೆ ಮಂಡಳಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 2020-21 ನೇ ಸಾಲಿನಲ್ಲಿ ಕೋವಿಡ್-19 ರಿಂದಾಗಿ ರೇಷ್ಮೆ ಬೆಲೆ ತೀವ್ರವಾಗಿ ಇಳಿದು ರೈತರು/ರೀಲರುಗಳು  ಸಂಕಷ್ಟದಲ್ಲಿದ್ದಾಗ ಸುಮಾರು 60 ಟನ್‌ಗಳಷ್ಟು ರೇಷ್ಮೆ ನೂಲನ್ನು ಒತ್ತೆ ಇಟ್ಟುಕೊಂಡು ಅವರಿಗೆ ಸಾಲ ನೀಡಿರುತ್ತದೆ. ಅಲ್ಲದೇ ಈ ಸಾಲಿನಲ್ಲಿ ರೈತರಿಂದ/ ರೀಲರುಗಳಿಂದ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ನೂಲನ್ನು ಖರೀದಿಸಿ ಅವರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಿದೆ.  ರೈತರು ಹಾಗೂ ನೂಲುಬಿಚ್ಚಾಣಿಕೆದಾರರಿಗೆ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿದಂತಾಗಿದೆ. ಮಂಡಳಿಯ  ಕಾರ್ಯಚಟುವಟಿಕೆಯಿಂದಾಗಿ ರಾಜ್ಯದಾದ್ಯಂತ ರೈತರು/ರೀಲರುಗಳು/ ಹುರಿಕಾರರು/ ನೇಕಾರರಿಗೆ ನೇರವಾಗಿ/ ಪರೋಕ್ಷವಾಗಿ  ಉದ್ಯೋಗಾವಕಾಶಗಳು ಸಹ ಸಿಗುವಂತಾಗಿದೆ.

ಇತ್ತೀಚಿನ ನವೀಕರಣ​ : 26-11-2021 05:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080