ಅಭಿಪ್ರಾಯ / ಸಲಹೆಗಳು

ಕಾರ್ಯಚಟುವಟಿಕೆ

ಖರೀದಿ ಚಟುವಟಿಕೆ:

ರೇಷ್ಮೆ ನೂಲು ಉತ್ಪಾದನೆ ಮಾಡುವ ರಾಜ್ಯದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ರೇಷ್ಮೆ ವಿನಿಮಯ ಕೇಂದ್ರಗಳು ಇದ್ದು,   ಮಾರುಕಟ್ಟೆಯಲ್ಲಿ ರೇಷ್ಮೆ ನೂಲಿನ ಬೆಲೆಗಳಲ್ಲಿ ದಿಢೀರ್ ಕುಸಿತ ಕಂಡಾಗ ಮಂಡಳಿಯು ತಕ್ಷಣ ಮಧ್ಯ ಪ್ರವೇಶಿಸಿ ರೇಷ್ಮೆ ನೂಲನ್ನು ಖರೀದಿಸಿ ಬೆಲೆ ಕುಸಿತವನ್ನು ತಡೆಗಟ್ಟುವುದು. ಮಂಡಳಿಯು ರೇಷ್ಮೆ ನೂಲನ್ನು ರೇಷ್ಮೆ ವಿನಿಮಯ ಕೇಂದ್ರಗಳಲ್ಲಿ ಖರೀದಿ ಮಾಡುತ್ತದೆ.  ಖರೀದಿಸಿದ ರೇಷ್ಮೆಗೆ ರೀಲರುಗಳಿಗೆ ಸ್ಥಳದಲ್ಲ್ಲೇ ವಿನಿಮಯ ಕೇಂದ್ರದ ಮುಖಾಂತರ ಹಣವನ್ನು ನಗದು (ಚೆಕ್) ರೂಪದಲ್ಲಿ ಪಾವತಿ ಮಾಡತ್ತಿದೆ. ಖರೀದಿಗೆ ಮುನ್ನ ಫಿಲೇಚರ್ ರೇಷ್ಮೆಯನ್ನು ಕೇಂದ್ರ ರೇಷ್ಮೆ ಮಂಡಳಿ ಮುಖಾಂತರ ತಾಂತ್ರಿಕ ಪರೀಕ್ಷೆಗೊಳಪಡಿಸಿ ಖರೀದಿಸಲಾಗುವುದು.

ಖರೀದಿಗೂ ಮುನ್ನ ಗುಣಮಟ್ಟದ ಪರೀಕ್ಷೆ:

ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯು   ಉತ್ತಮ ಗುಣಮಟ್ಟದ ರೇಷ್ಮೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.ಖರೀದಿಗೂ ಮುನ್ನ ಫೀಲೇಚರ್ ರೇಷ್ಮೆಯ ಮಾದರಿಯನ್ನು ಗುಣಮಟ್ಟದ ಪರೀಕ್ಷೆಗಾಗಿ ಕೇಂದ್ರ ರೇಷ್ಮೆ ಮಂಡಳಿಗೆ ನೀಡಲಾಗುತ್ತದೆ ಮತ್ತು ನುರಿತ ಅನುಭವಿ ಅಧಿಕಾರಿಗಳಿಂದ ಚರಕಾ ರೇಷ್ಮೆಯ ಗುಣಮಟ್ಟವನ್ನು ಕಣ್ಣೋಟ ಪರೀಕ್ಷೆಯಿಂದಲೇ  ತಿಳಿಯಲಾಗುತ್ತದೆ.

ಖರೀದಿ ಶಾಖೆಗಳು:  ಬೆಂಗಳೂರು, ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೋಲಾರ, ಮತ್ತು ಚಾಮರಾಜನಗರ (ಕರ್ನಾಟಕ ರಾಜ್ಯದಲ್ಲಿ ಮಾತ್ರ).

 

ಹುರಿ ಚಟುವಟಿಕೆ:

ನೇಕಾರರಿಗೆ ಬೇಕಾಗುವ ಹುರಿ ರೇಷ್ಮೆಯನ್ನು ಮಂಡಳಿಯಲ್ಲಿ ನೊಂದಾಯಿಸಿರುವ ಹುರಿಕಾರರಿಂದ ಉತ್ಪಾದಿಸಿ, ಮಾರಾಟ ಮಾಡುವುದು ಮಂಡಳಿಯ ಮತ್ತೊಂದು ಕಾರ್ಯ ಚಟುವಟಿಕೆಯಾಗಿರುತ್ತದೆ. ಹುರಿ ರೇಷ್ಮೆ ತಯಾರು ಮಾಡಲು ಮಜೂರಿ ಆಧಾರಿತ ಖಾಸಗಿ ಹುರಿಕಾರರನ್ನು ಅದರಲ್ಲೂ ಮಹಿಳಾ ಉದ್ಯಮಿಗಳನ್ನು ನೇಮಕ ಮಾಡಿಕೊಂಡು ಹುರಿ ರೇಷ್ಮೆಯನ್ನು ಉತ್ಪಾದನೆ ಮಾಡಿಸಿ, ಮಾರಾಟ ಮಾಡಲಾಗುತ್ತದೆ.

ಹುರಿ ಶಾಖೆಗಳು:  ಬೆಂಗಳೂರು, ಆನೇಕಲ್ ಮತ್ತು ಮಾಗಡಿ, ಕೊಳ್ಳೇಗಾಲ.

 

ಮಾರಾಟ ಚಟುವಟಿಕೆ:

ಖರೀದಿ ಮಾಡಿದ ರೇಷ್ಮೆಯನ್ನು ನೇರವಾಗಿ ನೇಕಾರರಿಗೆ ನ್ಯಾಯಯುತ ಬೆಲೆಯಲ್ಲಿ ದೊರೆಯುವಂತೆ ಮಾಡಲು ರೇಷ್ಮೆ ಬಟ್ಟೆ ಉತ್ಪಾದನೆಯ ಪ್ರಮುಖ ಸ್ಥಳಗಳಲ್ಲಿ ದಾಸ್ತಾನು ಮತ್ತು ಮಾರಾಟ ಶಾಖೆಗಳನ್ನು ಸ್ಥಾಪಿಸಲಾಗಿದ್ದು, ಈ ಶಾಖೆಗಳ ಮುಖಾಂತರ ನೇಕಾರರು ಮತ್ತು ರೇಷ್ಮೆ ಗ್ರಾಹಕರಿಗೆ ನಗದು ಮತ್ತು ಸಾಲದ ರೂಪದಲ್ಲಿ ರೇಷ್ಮೆ ಮಾರಾಟ ಮಾಡಲಾಗುತ್ತದೆ. 

ಎಲ್ಲಾ ಮಾರಾಟ ಶಾಖೆಗಳಲ್ಲೂ ಮಾರಾಟದ ವ್ಯವಸ್ಥೆಯು ನಗದು ಮತ್ತು ಸಾಲದ ರೂಪದಲ್ಲಿ ನಡೆಯುತ್ತದೆ. 

ಮಂಡಳಿಯು ಸಾಲದ ರೂಪದಲ್ಲಿ 90 ದಿನಗಳವರೆಗೆ ಸಾಲ ನೀಡುತ್ತದೆ.  ಇದಕ್ಕೆ ಖರೀದಿ ಮಾಡಿದ ದಿನದಿಂದ ಸಾಲಗಾರರು ಬಡ್ಡಿ ನೀಡಬೇಕಿದ್ದು, ಸಾಲ ಮಂಜೂರಾತಿಗಾಗಿ ಆಧಾರ ನೀಡಬೇಕಿರುತ್ತದೆ. ಬ್ಯಾಂಕ್ ಭದ್ರತೆ ಮತ್ತು ಭದ್ರತಾ ಠೇವಣಿ ಆಧಾರದ ಮೇಲೆ ಮಾತ್ರ ಸಾಲ ನೀಡಲಾಗುತ್ತದೆ. 

ಮಾರಾಟ ಶಾಖೆಗಳು:

ಕರ್ನಾಟಕ   - ಬೆಂಗಳೂರು,  ಇಳಕಲ್, ಗದಗ-ಬೆಟಗೇರಿ, ಶಿಡ್ಲಘಟ್ಟ ಮತ್ತುಕೊಳ್ಳೇಗಾಲ.

ತಮಿಳುನಾಡು - ಕುಂಭಕೋಣಂ ಮತ್ತು ಕಾಂಚೀಪುರಂ.

ಇತ್ತೀಚಿನ ನವೀಕರಣ​ : 20-10-2020 11:17 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080