ಅಭಿಪ್ರಾಯ / ಸಲಹೆಗಳು

ಯೋಜನೆ

ರೇಷ್ಮೆ ಒತ್ತೆ ಸಾಲ/ ಖರೀದಿ:

ರಾಜ್ಯದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರು, ರೇಷ್ಮೆ ಬೆಳೆಗಾರರಿಂದ ಖರೀದಿಸಿದ ರೇಷ್ಮೆ ಗೂಡುಗಳಿಂದ ಉತ್ಪಾದಿಸಿದ ರೇಷ್ಮೆಯನ್ನು  ಅನ್ಯ ರಾಜ್ಯಗಳ ಮತ್ತು ಬೆಂಗಳೂರಿನ ವ್ಯಾಪಾರಸ್ಥರಿಗೆ ವ್ಯಾಪಾರ  ಮಾಡುತ್ತಿದ್ದು, ಕೋವಿಡ್-19 ರ ಹಿನ್ನೆಲೆಯಲ್ಲಿ ನೂಲು ಬಿಚ್ಚಾಣಿಕೆದಾರರು ಉತ್ಪಾದಿಸಿದ ಕಚ್ಚಾ ರೇಷ್ಮೆಯು ನೂಲು ಬಿಚ್ಚಾಣಿಕೆದಾರರ ಬಳಿಯೇ ಉಳಿದಿದ್ದರಿಂದ ನೂಲು ಬಿಚ್ಚಾಣಿಕೆದಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನು ಮನಗಂಡು ಅವರ ಬಳಿ ಇರುವ ಕಚ್ಚಾ ರೇಷ್ಮೆಯನ್ನು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ವತಿಯಿಂದ ಖರೀದಿಸಿದಲ್ಲಿ/ನಿಯಮಾನುಸಾರ  ಒತ್ತೆ ಇಟ್ಟುಕೊಂಡು ಸಾಲ ನೀಡಿದಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಆರ್ಥಿಕ ಸಂಕಷ್ಟವು ನಿವಾರಣೆಯಾಗಿ ರೇಷ್ಮೆ ಬೆಳೆಗಾರರಿಂದ ರೇಷ್ಮೆ ಗೂಡುಗಳನ್ನು ಖರೀದಿಸಲು ಸಹಾಯವಾಗುತ್ತದೆ ಹಾಗೂ ಇದರಿಂದ ರೇಷ್ಮೆ ಬೆಳೆಗಾರರಿಗೂ ಅನುಕೂಲವಾಗುವುದರಿಂದ ರೇಷ್ಮೆ  ನೂಲು ಬಿಚ್ಚಾಣಿಕೆದಾರರು ರೇಷ್ಮೆ ವಿನಿಮಯ ಕೇಂದ್ರಗಳಿಗೆ ವಹಿವಾಟಿಗೆ ತರುವ ಕಚ್ಚಾ  ರೇಷ್ಮೆಯನ್ನು ಖರೀದಿಸಲು/ಒತ್ತೆ ಸಾಲ ನೀಡುವ ಉದ್ದೇಶಕ್ಕಾಗಿ 2020-21 ನೇ ಸಾಲಿನಲ್ಲಿ ರೂ.20.00 ಕೋಟಿಗಳ ಅನುದಾನವನ್ನು ಸರ್ಕಾರದಿಂದ ನೀಡಲಾಗಿರುತ್ತದೆ.

ರೇಷ್ಮೆ ನೂಲು ಒತ್ತೆ ಯೋಜನೆಯಲ್ಲಿ ಒಬ್ಬ ರೀಲರ್‌ನಿಂದ  ಉತ್ತಮ ಗುಣಮಟ್ಟ ಇರುವ 10 ಕೇ.ಜಿ. ಯಿಂದ 100 ಕೇ.ಜಿ ವರೆಗೆ ರೇಷ್ಮೆ ನೂಲನ್ನು ಗರಿಷ್ಟ ರೇಷ್ಮೆ ಮೌಲ್ಯದ ಶೇ 70% ರಷ್ಟು ಅಥವಾ ರೂ.1.೦೦ ಲಕ್ಷಗಳಿಗೆ ಮೀರದಂತೆ ಒತ್ತೆ  ಸಾಲ ನೀಡಲಾಗುತ್ತದೆ. ಒತ್ತೆ ಇಟ್ಟ ರೇಷ್ಮೆ ನೂಲಿನ ಅವಧಿಯು 90 ದಿನಗಳು  ಆಗಿರುತ್ತದೆ. ಒತ್ತೆ ರೇಷ್ಮೆಯ ಮೇಲಿನ ಬಡ್ಡಿದರವನ್ನು ವಾರ್ಷಿಕ ಶೇ 10.25 ಸರಳ ಬಡ್ಡಿದರ ನಿಗದಿಪಡಿಸಲಾಗಿದೆ ಹಾಗೂ ಸೇವಾ ಶುಲ್ಕ ಪ್ರತಿ ಕೇ.ಜಿ.ಗೆ ರೂ.5/-  ರಂತೆ ನಿಗದಿಪಡಿಸಲಾಗಿದೆ.

ಆದರೆ ಕೋವಿಡ್-19 ರ ಸಂಕಷ್ಟ ಪರಿಸ್ಥಿತಿಯಲ್ಲಿ ಪ್ರಸ್ತುತ ನೀಡುತ್ತಿರುವ ರೂ.1.00 ಲಕ್ಷಗಳ ಒತ್ತೆ ಸಾಲದ ಮೊತ್ತವನ್ನು ರೂ. 2.00 ಲಕ್ಷಗಳಿಗೆ ಹೆಚ್ಚಿಸಿ, ಒತ್ತೆ ಇಟ್ಟ ರೇಷ್ಮೆ ನೂಲಿನ ಅವಧಿಯನ್ನು 90 ದಿನಗಳಿಂದ 120 ದಿನಗಳಿಗೆ  ಹೆಚ್ಚಿಸಲಾಗಿದೆ.

ಅದರಂತೆ ಮಂಡಳಿಯು  ನೂಲುಬಿಚ್ಚಣಿಕೆದಾರರಿಂದ 2020-21 ನೇ ಸಾಲಿನ ಸೆಪ್ಟಂಬರ್-2020 ರ ವರೆಗೆ ಸುಮಾರು 60  ಟನ್  ಪ್ರಮಾಣದ ರೂ.8.98 ಕೋಟಿ ಮೌಲ್ಯದ ರೇಷ್ಮೆಯನ್ನು  ಒತ್ತೆ ಇಟ್ಟುಕೊಳ್ಳಲಾಗಿದೆ ಮತ್ತು 68 ಟನ್ ರೇಷ್ಮೆ ನೂಲು ಪ್ರಮಾಣದ ಮೌಲ್ಯ ರೂ.15.72 ಕೋಟಿಗಳ ರೇಷ್ಮೆಯನ್ನು ಖರೀದಿ ಮಾಡಲಾಗಿದೆ. ಈ ಯೋಜನೆಯಿಂದ ಸುಮಾರು  4,581 ರೀಲರುಗಳಿಗೆ ಅನುಕೂಲವಾಗಿರುತ್ತದೆ.

ಇತ್ತೀಚಿನ ನವೀಕರಣ​ : 20-10-2020 11:17 AM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080